About

Saturday, March 16, 2013

ಕನ್ನಡದಲ್ಲಿ ಟೈಪಿಸುವುದು ಈಗ ಸುಲಭ

                              ಕನ್ನಡದಲ್ಲಿ ಟೈಪಿಸುವುದು ಈಗ ಸುಲಭ 


ಕಂಪ್ಯೂಟರ್ ಅನ್ನು ಇಂಗ್ಲಿಷ್ ನವರಿಗಾಗಿ ಮಾತ್ರ ಸೃಷ್ಟಿಸಿದರೇನೋ ಎನ್ನುವಷ್ಟು ಆ ಭಾಷೆ ಮಾಹಿತಿ
ಯುಗದಲ್ಲಿ ಅಧಿಪತ್ಯ ಸ್ಥಾಪಿಸಿದೆ. ಕನ್ನಡದಂತಹ ಭಾಷೆಗಳು ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು
ಪ್ರಯತ್ನ ಪಡುತ್ತಿವೆ. ಕನ್ನಡವನ್ನ ಕಂಪ್ಯೂಟರ್ ನಲ್ಲಿ ಉಪಯೋಗಿಸಲು ಸರಿಯಾದ ಪರಿಕರಗಳು ಇನ್ನೂ
ಕನ್ನಡಿಗರಿಗೆ ಲಭ್ಯವಾಗದಿರುವುದೂ ಒಂದು ಕಾರಣ.

ಅರೆ ! ಇದೇನಿದು,  ನಾನು ಕಂಪ್ಯೂಟರ್ ನಲ್ಲಿ ಕನ್ನಡದಲ್ಲಿ ಟೈಪ್ ಮಾಡುತ್ತಿರುವುದು ನಿಜವೇ !!? ?
 ಕನ್ನಡವನ್ನ  ಬಳಸುವುದು ಇಷ್ಟೋಂದು ಸುಲಭವೇ ? ಎಂದು ನಿಮಗೆ ಅನ್ನಿಸುವಂತ
ಮಾಡುತ್ತದೆ ಗೂಗಲ್ ನ ಒಂದು ತಂತ್ರಾಂಶ (software).

 ನುಡಿ, ಬರಹ ಇನ್ನೂ ಮುಂತಾದ ಕನ್ನಡ ತಂತ್ರಾಂಶಗಳನ್ನ  ಈ ಮುಂಚೆ ಬಳಸಿದ್ದರೂ,
ನನಗೆ ಗೂಗಲ್ ಕನ್ನಡ ತಂತ್ರಾಂಶ ಬಳಸಿದಾಗ ಸಿಕ್ಕಿದ comfort ಮಾತ್ರ ಅದ್ಭುತ.!
ಇದನ್ನು install ಮಾಡಿಕೊಳ್ಳುವುದು ಮತ್ತು ಉಪಯೋಗಿಸುವುದು ನೀರು ಕುಡಿದಷ್ಟೇ ಸುಲಭ.
ಗೂಗಲ್ ಕನ್ನಡವನ್ನ  ಬಳಸಲು ಕನ್ನಡ ಟೈಪಿಂಗ್ ನ್ನು  ಕಲಿಯಬೇಕಾದ ಮತ್ತು ಕನ್ನಡ ಕೀಲಿಮನೆಯನ್ನು
ಅಳವಡಿಸಿಕೊಳ್ಳಬೇಕಾದ ಅವಶ್ಯಕತೆ ಇಲ್ಲ.

ಜನಸಾಮಾನ್ಯರಿಗೆ ಅತಿಸುಲಭವಾಗಿ ಬಳಸಲು ಅವಕಾಶ ನೀಡುವ ಈ ತಂತ್ರಾಂಶ ಒಮ್ಮೆ
ಡೌನ್ಲೋಡ್ ಮಾಡಿ ನಮ್ಮWindows O.S ನ ಕಂಪ್ಯೂಟರ್ನಲ್ಲಿ ಅಳವಡಿಸಿದರೆ,Googleಇನ್‌ಪುಟ್‌
ಪರಿಕರಗಳು  ಇಂಗ್ಲಿಷ್ / QWERTY ಕೀಬೋರ್ಡ್ ಬಳಸಿ ಕನ್ನಡ  ಭಾಷೆಯನ್ನು ಬರೆಯಲು ಬಳಕೆದಾರರರಿಗೆ
 ಸಹಾಯ  ಮಾಡುತ್ತದೆ  ಇಂಗ್ಲಿಷ್ ಅಕ್ಷರಗಳನ್ನು ಬಳಸಿಕೊಂಡು ಪದದ ಉಚ್ಛಾರಣೆಯಂತೆ
ಬಳಕೆದಾರರು ಟೈಪ್ ಮಾಡಬಹುದು ಮತ್ತು ನಾವು ಟೈಪಿಸುವ ಇಂಗ್ಲಿಷ್ ಅಕ್ಷರಗಳನ್ನ
ಅದು ಕನ್ನಡ ಅಕ್ಷರವಾಗಿ  ಪರಿವರ್ತಿಸುತ್ತದೆ. ಈ ತಂತ್ರಾಂಶವು  ಲಿಪ್ಯಂತರ, IME ಹಾಗೂ ಆನ್‌-ಸ್ಕ್ರಿನ್‌‌ ಕೀಬೋರ್ಡ್‌ಗಳನ್ನು ಒಳಗೊಂಡಿರುತ್ತವೆ.

ಈ ತಂತ್ರಾಂಶ ವನ್ನು  ಡೌನ್ಲೋಡ್ ಮಾಡಲು  ಇಲ್ಲಿ ಕ್ಲಿಕ್ಕಿಸಿ.

 Windows ಗಾಗಿGoogle ಇನ್‌ಪುಟ್‌ ಪರಿಕರಗಳು ಪ್ರಸ್ತುತ 22 ವಿವಿಧ ಭಾಷೆಗಳಲ್ಲಿ ಲಭ್ಯವಿದೆ: ಅಂಹಾರಿಕ್‌ , ಅರಬಿಕ್, ಬೆಂಗಾಲಿ, ಪರ್ಶಿಯನ್, ಗ್ರೀಕ್, ಗುಜರಾತಿ, ಹೆಬ್ರೂ, ಹಿಂದಿ, ಕನ್ನಡ, ಮಲಯಾಳಂ, ಮರಾಠಿ, ನೇಪಾಳಿ, ಒರಿಯಾ, ಪಂಜಾಬಿ, ರಶಿಯನ್, ಸಂಸ್ಕೃತ, ಸರ್ಬಿಯನ್, ಿಂಹಳ, ತಮಿಳು, ತೆಲುಗು, ಮತ್ತು ಉರ್ದು. ಭಾಷೆಗಳಲ್ಲೂ ಲಭ್ಯವಿದೆ.