About

Monday, September 6, 2010

ಪರಿವರ್ತನೆಯೇ ಜಗದ ನಿಯಮ

ಋತು ಚಕ್ರ ತಿರುಗುವುದು, ಕಾಲನೆದೆ ಮರುಗುವುದು/
ಮೃತನ ಮೈಯಿಂದ ಹೊಸ ಹುಲ್ಲು ಮೊಳೆಯುವುದು/
ಕ್ಶಿತಿ ಗರ್ಭಧರಿಸುವಳು, ಮತ್ತುದಿಸುವುದು ಜೀವ/
ಸತತ ಕೃಷಿಯೋ ಪ್ರಕೃತಿ ಮಂಕುತಿಮ್ಮ/
-ಡಿವಿಜಿ
’ಪರಿವರ್ತನೆಯೇ ಜಗದ ನಿಯಮ’
ಹೌದು, ಪರಿವರ್ತನೆ ಅಥವಾ ಬದಲಾವಣೆ ಇಲ್ಲದ ಪ್ರಪಂಚದಲ್ಲಿ ಬದುಕುವುದಿರಲಿ, ಊಹಿಸಿಕೊಳ್ಳುವುದೂ ಕಷ್ಟ ಸಾಧ್ಯವೇ ಸರಿ .ನದಿ, ಕೆರೆ, ಕಟ್ಟೆಗಳ ನೀರು ಸೂರ್ಯನ ಶಾಖದಿಂದ ಆವಿಯಾಗಿ, ಆವಿ ಮೋಡವಾಗಿ, ಮಾರುತಗಳಾಗಿ ಅದರಿಂದ ಮಳೆ ಸುರಿದು ಧರಣಿ ತಂಪಾಗಿ, ಹಸಿರು ಸೊಂಪಾಗಿ ಬೆಳೆ ತೆನೆಗಳು ಹೊಯ್ದಾಡಿ, ಮನುಜ ಬಾಳಿನ ಉಸಿರಾಗಿ ಪ್ರಕೃತಿ ಮಾಡುವ ಈ ಬದಲಾವಣೆಗಳೆ ಅಲ್ಲವೆ ಭೂಮಿ ಮೇಲೆ ಜೀವಿಗಳು ಉದಿಸಲು ಮತ್ತೆ ವಿಕಾಸ ಹೊಂದಲು ಪ್ರಮುಖ ಕಾರಣ. ಬದಲಾವಣೆ ಇಲ್ಲದ ಭೂಮಿಯೂ ಮಣ್ಣು, ಕಲ್ಲು ಮತ್ತು ಧೂಳಿನ ರಾಶಿಯಿಂದ ಕೂಡಿದ ಮರುಭೂಮಿಯಂತೆ ಕಾಣಿಸುತ್ತಿತ್ತು. ಚಳಿಗಾಲ, ಮಳೆಗಾಲ, ಬೇಸಿಗೆಕಾಲಗಳೆಲ್ಲವೂ ಬದಲಾವಣೆಯ ಸಂಕೇತವೆ...
ನದಿಯು ತನ್ನ ಪಾತ್ರದಲ್ಲಿ ಎಷ್ಟೋ ಸಾರವನ್ನು ಹೀರುತ್ತ ತುಂಬಿ ಹರಿದರೆ, ಕೊಳವು ಒಂದೆ ಸ್ಥಳದಲ್ಲಿಯೇ ನಿಲ್ಲುತ್ತದೆ ಆದರೆ ನದಿ ಮತ್ತು ಕೊಳದ ನೀರು 
ಒಂದೇ ಆದರೂ, ಶುದ್ಧತೆಯ ವಿಚಾರದಲ್ಲಿ ವ್ಯತ್ಸಾಹವಿರುವುದು ಸ್ಪಷ್ಟ. ಅಂದರೆ ನೀರು ಹರಿದಷ್ಟು ಶುದ್ಧವಾಗಿರುತ್ತದೆ. ಈ ನಿಯಮವು ಮನುಷ್ಯನ ಜೀವನಕ್ಕೂ
ಅನ್ವಯೈಸುತ್ತದೆ ಎಂದು ನನ್ನ ಭಾವನೆ. ಈ ಸಂಬಂಧವಾಗಿ ಡಿವಿಜಿ ರವರು ಬರೆದಿರುವ ಮೇಲಿನ ಸಾಲುಗಳು ಎಷ್ಟು ಪರಿಪೂರ್ಣವಾಗಿದೆ ಅಲ್ಲವೆ... ?

No comments:

Post a Comment